ಕರೊನಾ ಮತ್ತು ಲಾಕ್ಡೌನ್ ಪರಿಣಾಮದಿಂದ ರಾಜ್ಯದ ಉದ್ಯಮಗಳು ಕಂಗಾಲಾಗಿರುವಂತೆಯೇ ಕೈಗಾರಿಕೆ ಇಲಾಖೆಯಿಂದ ಧನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 138 ಯೋಜನೆಗಳಿಗೆ 30,532 ಕೋಟಿ ರೂ.ಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿವಿಧ ಕಂಪನಿಗಳು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿವೆ.