ಆರ್ಥಿಕ ಹಿಂಜರಿತದ ನಡುವೆ ದಕ್ಷಿಣ ಕನ್ನಡದಲ್ಲಿ ಟಿಸಿಎಸ್ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯತೆ

ಕೊರೊನಾ ಸಾಂಕ್ರಾಮಿಕ ವೈರಸ್‌ ಎಲ್ಲೆಡೆ ಭೀತಿ ಮೂಡಿಸಿ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿರುವುದರ ನಡುವೆಯೇ ರಾಜ್ಯದ ಆರ್ಥಿಕ ಹೆಬ್ಬಾಗಿಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಂಪನಿಗಳು ಬೃಹತ್‌ ಪ್ರಮಾಣದ ಹೂಡಿಕೆಗೆ ಮುಂದಾಗಿರುವುದು ಅರ್ಥಿಕ ಚೈತನ್ಯಕ್ಕೆ ಹೊಸ ಅವಕಾಶ ಸೃಷ್ಟಿಸಿದೆ.